ಕಾರ್ಯಕ್ರಮಗಳು

ನಾಡವರ ಸಮಾಜ ಬೆಂಗಳೂರಿನ ಮುಂಬರುವ ಹಾಗೂ ಪೂರ್ಣಗೊಂಡ ಕಾರ್ಯಕ್ರಮಗಳು

ನಾಡವರ ಯುವ ಸಮಾಗಮ - 2026
29
ಮಾರ್ಚ್
ನಾಡವರ ಯುವ ಸಮಾಗಮ - 2026
2026-03-29
The Kaleido Hall (Century Club) Bengaluru
ಮುಂಬರುವ ಕಾರ್ಯಕ್ರಮ

Nadavara Yuva Samagama is a special gathering organized by Nadavara Samaja (R.) Bengaluru to bring together the young members of the Nadavara community. The event aims to provide a platform for networking, inspiration, and leadership development while strengthening community bonds. Through engaging talks and interactions, participants will gain insights into career opportunities, personal growth, and community involvement.

Read more
RSVP: Shekhar Gaonkar - 97909 41617 | Raghavendra Nayak - 99020 00753
ನಾಡವರ ಬ್ಯಾಡ್ಮಿಂಟನ್ ಟೂರ್ನಮೆಂಟ್ - 7 ನೇ ಆವೃತ್ತಿ
11
ಜನವರಿ
ನಾಡವರ ಬ್ಯಾಡ್ಮಿಂಟನ್ ಟೂರ್ನಮೆಂಟ್ - 7 ನೇ ಆವೃತ್ತಿ
2026-01-11
Accolades Badminton & Sports Academy Near Nagasandra Metro Station
ಪೂರ್ಣಗೊಂಡಿದೆ

ನಾಡವರ ಸಮಾಜ ಬೆಂಗಳೂರು ಆಶ್ರಯದಲ್ಲಿ 7 ನೇ ಆವೃತ್ತಿಯ "ನಾಡವರ ಬ್ಯಾಡ್ಮಿಂಟನ್ ಟೂರ್ನಮೆಂಟ್" ಇದೇ ಬರುವ 11 ಜನವರಿ 2026 ರವಿವಾರ ನಡೆಯಲಿದೆ. ವಿಶ್ವ ನಾಡವ ಬ್ಯಾಡ್ಮಿಂಟನ್ ಆಟಗಾರರನ್ನು ನಾಡವರ ಸಮಾಜವು ಈ ಸ್ಪರ್ಧೆಗೆ ಆಹ್ವಾನಿಸುತ್ತಿದೆ. ಪುರುಷ ಹಾಗೂ ಮಹಿಳಾ ಡಬಲ್ಸ್, ಮಿಕ್ಸೆಡ್ ಡಬಲ್ಸ್, ಕಿಡ್ಸ್, ಸೀನಿಯರ್ ಡಬಲ್ಸ್ ಹೀಗೆ ವಿವಿಧ ಆಯಾಮಗಳಲ್ಲಿ ಟೂರ್ನಮೆಂಟ್ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದ ತಂಡಕ್ಕೆ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ ಲಭಿಸಲಿದೆ. ಅಲ್ಪೋಪಹಾರದೊಂದಿಗೆ ಕಾರ್ಯಕ್ರಮದ ಉದ್ಘಾಟನೆ, ಮಧ್ಯಾಹ್ನ ಮಾಂಸಹಾರಿ ಹಾಗೂ ಶಾಖಾಹಾರಿ ಊಟ ಮತ್ತು ಸಂಜೆಯ ಚಹಾದೊಂದಿಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಎಲ್ಲ ನಾಡವ ಮಿತ್ರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿ.

Read more
Completed
ನಾಡವರ ಸಮಾಜ (ರಿ.) ಬೆಂಗಳೂರು - ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
14
ಡಿಸೆಂಬರ್
ನಾಡವರ ಸಮಾಜ (ರಿ.) ಬೆಂಗಳೂರು - ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
2025-12-14
ಉತ್ತರ ಕನ್ನಡ ಸಂಘ - ನಂದಿನಿ ಬಡಾವಣೆ, ಬೆಂಗಳೂರು
ಪೂರ್ಣಗೊಂಡಿದೆ

ಮಾನ್ಯ ಸದಸ್ಯ ಬಂಧುಗಳೇ,
ಈ ಸೂಚನಾ ಪತ್ರದ ಮೂಲಕ ನಾಡವರ ಸಮಾಜ ಬೆಂಗಳೂರು, ಇದರ ಎಲ್ಲ ಸದಸ್ಯರಿಗೆ ತಿಳಿಸುವುದೇನೆಂದರೆ, ದಿನಾಂಕ 14-11-2025 ರಂದು ನಡೆದ ನಾಡವರ ಸಮಾಜ ಬೆಂಗಳೂರು ಇದರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದಂತೆ, ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ದಿನಾಂಕ 14-12-2025 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಉತ್ತರ ಕನ್ನಡ ಸಂಘ - ನಂದಿನಿ ಬಡಾವಣೆ, ಬೆಂಗಳೂರು ಇಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ. ಆದ್ದರಿಂದ ಸದಸ್ಯರುಗಳು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ. ಸಭೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಕಾರ್ಯಕ್ರಮಗಳು:
1. ಪ್ರಾರ್ಥನೆ
2. ಸ್ವಾಗತ - ಕಾರ್ಯದರ್ಶಿಗಳಿಂದ
3. ಮೃತ ಸದಸ್ಯರಿಗೆ ಶೃದ್ಧಾಂಜಲಿ ಅರ್ಪಿಸುವುದು
4. ಚುನಾವಣಾಧಿಕಾರಿಯವರ ನೇಮಕದ ಸ್ಥಿರೀಕರಣ
5. ವಾರ್ಷಿಕ ವರದಿ - ಕಾರ್ಯದರ್ಶಿಗಳಿಂದ
6. ಜಮಾ ಖರ್ಚು ಮಂಡನೆ - ಖಜಾಂಚಿ ಅವರಿಂದ
7. ರಾಜರಾಜೇಶ್ವರಿ ನಗರದಲ್ಲಿರುವ ನಮ್ಮ ನಿವೇಶನದ ಬಗ್ಗೆ ಚರ್ಚೆ
8. ಮೆಂಬರ್ಶಿಪ್ ಪಟ್ಟಿಯನ್ನು ಧೃಡೀಕರಿಸುವುದು
9. ಅಧ್ಯಕ್ಷರ ಅನುಮತಿಯ ಮೇರೆಗೆ ಬರಬಹುದಾದ ಇತರೆ ವಿಷಯಗಳ ಚರ್ಚೆ
10. ಅಧ್ಯಕ್ಷರ ಭಾಷಣ
11. ವಂದನಾರ್ಪಣೆ
12. 2025-26 ಮತ್ತು 2026-27 ನೇ ಸಾಲಿನ ಕಾರ್ಯಕಾರಿ ಸಮಿತಿಗೆ 11 ಸದಸ್ಯರ ಆಯ್ಕೆ / ಚುನಾವಣೆ ಹಾಗೂ ಫಲಿತಾಂಶ ಘೋಷಣೆ
ನಂತರ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ.

ವಂದನೆಗಳೊಂದಿಗೆ,
ಅಧ್ಯಕ್ಷರು, ಸರ್ವಸದಸ್ಯರು
ನಾಡವರ ಸಮಾಜ, ಬೆಂಗಳೂರು

Read more
Completed
ನಾಡವರ ಹಬ್ಬ ಬೆಂಗಳೂರು
14
ಸೆಪ್ಟೆಂಬರ್
ನಾಡವರ ಹಬ್ಬ ಬೆಂಗಳೂರು
2025-09-14
ಬಂಟರ ಸಂಘ, ವಿಜಯನಗರ - ಬೆಂಗಳೂರು
ಪೂರ್ಣಗೊಂಡಿದೆ

ಆತ್ಮೀಯ ಸಮಾಜ ಬಾಂಧವರೇ,
ಬೆಂಗಳೂರು ನಾಡವರ ಹಬ್ಬ, ಇದೇ ಬರುವ ದಿನಾಂಕ 14.09.2025, ರವಿವಾರದಂದು ಬಂಟರ ಸಂಘ ವಿಜಯನಗರದಲ್ಲಿ ನಡೆಯಲಿದೆ ಎಂಬುದನ್ನು ಮತ್ತೊಮ್ಮೆ ನಿಮಗೆಲ್ಲರಿಗೂ ನೆನಪಿಸುತ್ತಿದ್ದೇನೆ.
"ನಮ್ಮ ಸಮಾಜದ ಏಳ್ಗೆ
ನಮ್ಮ ನಾಡವರ ಗೆಲ್ಗೆ"
ಎಂಬ ಸಂಕಲ್ಪ ದಿಂದ
ಬೇರೆ ಎಲ್ಲ ಕೆಲಸಗಳಿಂದ ಬಿಡುವು ಮಾಡಿಕೊಂಡು, ಒಂದು ದಿನ "ಸಮಾಜದವರ
ಜೊತೆ ಮಾತು ಕಥೆ"ಯಲ್ಲಿ ಜೊತೆಯಾಗಿ, ಪ್ರೀತಿ, ವಿಶ್ವಾಸ ಹೆಚ್ಚಿಸಿ, ಅರೋಗ್ಯ ಕ್ಷೇಮ ಗಳನ್ನು ವಿಚಾರಿಸಿ, ಕುಶಲೋಪರಿ ಸುವರ್ಣವಕಾಶಕ್ಕೆ
ಕೈ ಬೀಸಿ ಕರೆಯುತ್ತಿದೆ.
ಕುಟುಂಬ ಸಮೇತರಾಗಿ ಸರಿಯಾಗಿ ಆಗಮಿಸಿ ತಮ್ಮ ತನು ಮನ ಧನ ಗಳಿಂದ ಸಹಾಯ ಮಾಡಿ ಸಹಕರಿಸಿ.
ಸಂಘವನ್ನು ಬೆಳೆಸೋಣ! ಕಾರ್ಯಕ್ರಮವನ್ನು ಯಶಸ್ವಿ ಗೊಳಿಸೋಣ! ಸಂಘಟನೆಯನ್ನು ಗೌರವಿಸೋಣ!
ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗೋಣ!
ಸಂಘದ ಯಶಸ್ಸು ನಮ್ಮ ದಾಗಿಸೋಣ!
ಎಲ್ಲರು ಬನ್ನಿ ಜೊತೆಯಾಗೋಣ!!


ಧನ್ಯವಾದಗಳು

Read more
Completed
ನಾಡವರ ಮಾತುಕತೆ- ಈಸ್ಟ್ ಬೆಂಗಳೂರು
24
ಆಗಸ್ಟ್
ನಾಡವರ ಮಾತುಕತೆ- ಈಸ್ಟ್ ಬೆಂಗಳೂರು
2025-08-24
AKME Harmony - Bellandur
ಪೂರ್ಣಗೊಂಡಿದೆ

ನಾಡವರ ಸಮಾಜ (ರಿ)
ಬೆಂಗಳೂರು

ಆತ್ಮೀಯ ಸಮಾಜ ಬಂಧುಗಳೇ

ತಮಗೆಲ್ಲರಿಗೂ ಈ ಮೊದಲೇ ತಿಳಿಸಿರುವ ಹಾಗೆ ದಿನಾಂಕ 24.08.2025 ರವಿವಾರ ಬೆಳಿಗ್ಗೆ 9.30 ಕ್ಕೆ ಸರಿಯಾಗಿ "ಸಮಾಜದ ನಡೆ ನಿಮ್ಮ ಕಡೆ" ಮತ್ತು "ಮಾತುಕಥೆ ತಿಂಡಿಯ ಜೊತೆ " ಎಂಬ ವಿನುತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ತಾವೆಲ್ಲರೂ ಕುಟುಂಬ ಸಮೇತರಾಗಿ ಸರಿಯಾದ ಸಮಯದಲ್ಲಿ ಆಗಮಿಸಿ ಮಾತು ಕಥೆ, ಕುಶಲೋಪಾರಿ ಯೊಂದಿಗೆ
ಕೆಲವು ಕ್ಷಣಗಳನ್ನು ಜೊತೆಯಾಗಿ ಸವಿಯೋಣ.


ಇದು ನಾಡವರನ್ನು ಒಗ್ಗೂಡಿಸಲು ನಮ್ಮದೊಂದು ಸಣ್ಣ ಪ್ರಯತ್ನ.
ಸಂಘದ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನ ಸೇರಿಸುವ ಪ್ರಯತ್ನ. ವಿನೂತನ ಕಾರ್ಯಕ್ರಮ ಮಾಡುವಲ್ಲಿ ಎಲ್ಲರ ಸಲಹೆ, ಆಲೋಚನೆ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು.

ಭೇಟಿಯಾಗೋಣ

Read more
Completed
ನಾಡವರ ಮಾತುಕತೆ- ಸೌತ್ ಬೆಂಗಳೂರು
24
ಆಗಸ್ಟ್
ನಾಡವರ ಮಾತುಕತೆ- ಸೌತ್ ಬೆಂಗಳೂರು
2025-08-24
Nitesh Ceaser Palace - Kanakapura Road
ಪೂರ್ಣಗೊಂಡಿದೆ

ನಾಡವರ ಸಮಾಜ (ರಿ)
ಬೆಂಗಳೂರು

ಆತ್ಮೀಯ ಸಮಾಜ ಬಂಧುಗಳೇ

ತಮಗೆಲ್ಲರಿಗೂ ಈ ಮೊದಲೇ ತಿಳಿಸಿರುವ ಹಾಗೆ ದಿನಾಂಕ 24.08.2025 ರವಿವಾರ ಸಂಜೆ 4.30 ಕ್ಕೆ ಸರಿಯಾಗಿ "ಸಮಾಜದ ನಡೆ ನಿಮ್ಮ ಕಡೆ" ಮತ್ತು "ಮಾತುಕಥೆ ತಿಂಡಿಯ ಜೊತೆ " ಎಂಬ ವಿನುತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ತಾವೆಲ್ಲರೂ ಕುಟುಂಬ ಸಮೇತರಾಗಿ ಸರಿಯಾದ ಸಮಯದಲ್ಲಿ ಆಗಮಿಸಿ ಮಾತು ಕಥೆ, ಕುಶಲೋಪಾರಿ ಯೊಂದಿಗೆ
ಕೆಲವು ಕ್ಷಣಗಳನ್ನು ಜೊತೆಯಾಗಿ ಸವಿಯೋಣ.


ಇದು ನಾಡವರನ್ನು ಒಗ್ಗೂಡಿಸಲು ನಮ್ಮದೊಂದು ಸಣ್ಣ ಪ್ರಯತ್ನ.
ಸಂಘದ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನ ಸೇರಿಸುವ ಪ್ರಯತ್ನ. ವಿನೂತನ ಕಾರ್ಯಕ್ರಮ ಮಾಡುವಲ್ಲಿ ಎಲ್ಲರ ಸಲಹೆ, ಆಲೋಚನೆ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು.

ಭೇಟಿಯಾಗೋಣ

Read more
Completed
ನಾಡವರ ಬ್ಯಾಡ್ಮಿಂಟನ್ ಟೂರ್ನಮೆಂಟ್ - 6 ನೇ ಆವೃತ್ತಿ
09
ಫೆಬ್ರವರಿ
ನಾಡವರ ಬ್ಯಾಡ್ಮಿಂಟನ್ ಟೂರ್ನಮೆಂಟ್ - 6 ನೇ ಆವೃತ್ತಿ
2025-02-09
Accolades Badminton & Sports Academy - Nagasandra
ಪೂರ್ಣಗೊಂಡಿದೆ

ಗೌರವಾನ್ವಿತ ಸಮಾಜ ಬಾಂಧವರೇ
ಪ್ರತಿ ವರ್ಷದಂತೆ ನಾಡವರ ಸಮಾಜ ಬೆಂಗಳೂರಿನ ಆಶ್ರಯದಲ್ಲಿ ನಡೆಯಲಿರುವ ನಾಡವರ "ಬ್ಯಾಡ್ಮಿಂಟನ್ ಪಂದ್ಯಾವಳಿ ಆವೃತ್ತಿ -6, " ಇದೇ ಬರುವ ಭಾನುವಾರ ದಿನಾಂಕ 09.02.2025 ರಂದು, ಅಕೋಲೆಡ್ಸ್ ಬ್ಯಾಡ್ಮಿಂಟನ್ &
ಸ್ಪೋರ್ಟ್ಸ್ ಅಕಾಡೆಮಿ, ನಾಗಸಂದ್ರ (ಮೆಟ್ರೋ ಸ್ಟೇಷನ್) ಹತ್ತಿರ ಬೆಂಗಳೂರಿನಲ್ಲಿ ನಡೆಯಲಿದೆ.
ಬ್ಯಾಡ್ಮಿಂಟನ್ ಟೂರ್ನಮೆಂಟ್
ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರಗಳು ಈಗಾಗಲೇ ತಮ್ಮೆಲ್ಲರನ್ನು ಖುದ್ದಾಗಿ, ಅಂಚೆ ಮತ್ತು ದೂರವಾಣಿ ಮೂಲಕ ಸಂಪರ್ಕಿಸಿ, ಕುಟುಂಬ ಸಮೇತರಾಗಿ ಆಗಮಿಸಲು ಆಹ್ವಾನಿಸಿರುತ್ತಾರೆ.
ಆದರೂ ಸಹ ಯಾವುದೇ ಕಾರಣಗಳಿಂದ ತಲುಪದಿದ್ದರೆ, ದಯವಿಟ್ಟು ನಮ್ಮ ಈ ಅಹ್ವಾನವನ್ನು ಮನ್ನಿಸಿ, ಪಂದ್ಯಾವಳಿಗೆ ಆಗಮಿಸಿಬೇಕಾಗಿ ಬೇಡಿಕೊಳ್ಳುತ್ತೇನೆ.
ತಮ್ಮೆಲ್ಲರ ಅಮೂಲ್ಯವಾದ ಉಪಸ್ಥಿತಿ, ತನುಮನಧನಗಳಿಂದ
ಸಹಾಯಮಾಡಿ ಸಹಕರಿಸಿ ಕಾರ್ಯಕ್ರಮವನ್ನು
ಯಶಸ್ವಿ ಗೊಳಿಸಲು ವಿನಂತಿಸುತ್ತೇನೆ.🙏🙏
ಅಧ್ಯಕ್ಷರು
ನಾಡವರ ಸಮಾಜ
ಬೆಂಗಳೂರು

Read more
Completed